ಮುಂಗಾರಿನ ಅಭಿಷೇಕ
- ಜಿ.ಎಸ್.ಶಿವರುದ್ರಪ್ಪ
ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು
ಧಗೆಯಾರಿದ ಹೃದಯದಲಿ ಪುಟಿದೆದ್ದಿತು ಚೆಲುವು//
ಬಾಯಾರಿದ ಬಯಕೆಗಳಲಿ ತಳತಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ ಪ್ರೀತಿ ಅಂತ ಹಸಿರು//
ಮೈ-ಮನಗಳ ಕೊಂಬೆಯಲಿ ಹೊಮ್ಮುವ ದನಿ ಇಂಪು
ನಾಳೆಗೆ ನನಸಾಗುವ ಕನಸಿನ ಅರಳುವ ಹೂ ಕಂಪು//
ಭರವಸೆಗಳ ನೇಗಿಲ ಗೆರೆಗಳೆ ಕವನ
ಶ್ರಾವಣದಲಿ ಹೊಲಗಳಲ್ಲಿ ತೆನೆದೂಗುವ ಜೀವನೋತ್ಸಾಹ ಗಾನ//
- ಜಿ.ಎಸ್.ಶಿವರುದ್ರಪ್ಪ
ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು
ಧಗೆಯಾರಿದ ಹೃದಯದಲಿ ಪುಟಿದೆದ್ದಿತು ಚೆಲುವು//
ಬಾಯಾರಿದ ಬಯಕೆಗಳಲಿ ತಳತಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ ಪ್ರೀತಿ ಅಂತ ಹಸಿರು//
ಮೈ-ಮನಗಳ ಕೊಂಬೆಯಲಿ ಹೊಮ್ಮುವ ದನಿ ಇಂಪು
ನಾಳೆಗೆ ನನಸಾಗುವ ಕನಸಿನ ಅರಳುವ ಹೂ ಕಂಪು//
ಭರವಸೆಗಳ ನೇಗಿಲ ಗೆರೆಗಳೆ ಕವನ
ಶ್ರಾವಣದಲಿ ಹೊಲಗಳಲ್ಲಿ ತೆನೆದೂಗುವ ಜೀವನೋತ್ಸಾಹ ಗಾನ//
No comments:
Post a Comment